ಹೆಬ್ರಿ: ಪಟ್ಟಣದಲ್ಲಿ 14ನೇ ವರ್ಷದ ಹೆಬ್ಬೇರಿ ಉತ್ಸವಕ್ಕೆ ತಹಶೀಲ್ದಾರ್ ಪ್ರಸಾದ್ ಎಸ್.ಎ. ಚಾಲನೆ
Hebri, Udupi | Feb 13, 2024 ಹೆಬ್ರಿ ಪಟ್ಟಣದಲ್ಲಿ 14ನೇ ವರ್ಷದ ಹೆಬ್ಬೇರಿ ಉತ್ಸವಕ್ಕೆ ತಹಶೀಲ್ದಾರ್ ಪ್ರಸಾದ್ ಎಸ್.ಎ. ಚಾಲನೆ ನೀಡಿದರು. ಶ್ರೀ ಅನಂತ ಪದ್ಮನಾಭ ಫ್ರೆಂಡ್ಸ್ ಹೆಬ್ರಿ ಇವರ ಆಶ್ರಯದಲ್ಲಿ ನಡೆಯುವ ನಮ್ಮೂರ ಹಬ್ಬ ಹೆಬ್ಬೇರಿ ಉತ್ಸವದ 14ನೇ ವರ್ಷದ ಉತ್ಸವಕ್ಕೆ ತಹಶೀಲ್ದಾರ್ ಪ್ರಸಾದ್ ಎಸ್.ಎ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಜ್ಯವೆಲರಿ ಮಾಲಕ ನಾರಾಯಣ ಕೆ. ವಹಿಸಿದ್ದರು.