ಮಳವಳ್ಳಿ: ಹಾಡ್ಲಿ ಸರ್ಕಲ್ ವರ್ಕ್'ಶಾಪ್'ನಲ್ಲಿ ಕೆಲಸಗಾರರಿಬ್ಬರಿಂದ ₹ 3.20 ಲಕ್ಷ ಬೆಲೆ ಬಾಳುವ ಕಾಪರ್ ವೈರ್, ಕೇಬಲ್ ಕಳ್ಳತನ
ವರ್ಕ್'ಶಾಪ್ ಕೆಲಸಗಾರರಿಬ್ಬರು ₹ 3.20 ಲಕ್ಷ ಬೆಲೆ ಬಾಳುವ ಕಾಪರ್ ವೈರ್, ಕೇಬಲ್ ಕಳ್ಳತನ ಮಾಡಿರುವ ಘಟನೆ ಹಾಡ್ಲಿ ಸರ್ಕಲ್'ನಲ್ಲಿ ಜರುಗಿದೆ. ಮೊಹಮ್ಮದ್ ಶೋಹೇಬ ಹಾಗೂ ಸೈಯದ್ ತೌಹೀದ್ ಆರೋಪಿತರು. ಹಾಡ್ಲಿ ಸರ್ಕಲ್ ನಲ್ಲಿರುವ ಶಿವಶಂಕರ್ ಇಂಜಿನಿಯರಿಂಗ್ ಆಂಡ್ ರಿವೈಂಡಿಂಗ್ ವರ್ಕ್ಸ್ ಮಾಲೀಕ ಶಿವಶಂಕರ್ ಕೆ.ಜಿ ಎಂಬುವವರು ತಮ್ಮ ಕಾರ್ಮಿಕರ ವಿರುದ್ದ ಕಳ್ಳತನ ಮಾಡಿರುವ ಕುರಿತು ಆರೋಪಿಸಿ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಭಾನುವಾರ ನಗರದಲ್ಲಿ ಎಸ್ಪಿ ಕಚೇರಿ ಮಾಹಿತಿ ನೀಡಿದೆ.ಆರೋಪಿತರಿಬ್ಬರು ವರ್ಕ್'ಶಾಪ್'ನಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ₹ 3.20 ಲಕ್ಷ ಬೆಲೆ ಬಾಳುವ ಕಾಪರ್ ವೈರ್, ಕೇಬಲ್ ಕಳ್ಳತನವಾಗಿದೆ.