ಕೋಲಾರ: ವಿಮೆಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಮಾಡಿಸಬೇಕು:ಬೆಳ್ಳೂರು ಗ್ರಾಮದಲ್ಲಿ ಆರ್‌ಬಿಐ ಬ್ಯಾಂಕ್ ಅಧಿಕಾರಿ ಶೀಲ ಪ್ರಿಯಾ ಗೌತಮ್
Kolar, Kolar | Aug 11, 2025 ನಮ್ಮ ಜೀವನದ ಕಷ್ಟ ಕಾಲ ಹಾಗೂ ಇಳಿವಯಸ್ಸಿನಲ್ಲಿ ಆಸರೆಯಾಗಿ ನಿಲ್ಲುವ ವಿಮೆಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಮಾಡಿಸಬೇಕು ಎಂದು ಆರ್‌ಬಿಐ ಬ್ಯಾಂಕ್ ಅಧಿಕಾರಿ ಶೀಲ ಪ್ರಿಯಾ ಗೌತಮ್ ಹೇಳಿದರು. ಸೋಮವಾರ ಮಧ್ಯಾಹ್ನ 3: 30ರ ಸಮಯದಲ್ಲಿ ತಾಲ್ಲೂಕಿನ ಬೆಳ್ಳೂರು ಗ್ರಾ.ಪಂ ನಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ಗ್ರಾ.ಪಂ ವತಿಯಿಂದ ಆಯೋಜಿಸಿದ್ದ ಆರ್ಥಿಕ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.