ಶಿವಮೊಗ್ಗ: ಸಮರ್ಥ ಸೇತು-ಯುವಶಕ್ತಿ ಅಭಿಯಾನ ಸಮಾರೋಪ ಸಮಾರಂಭ: ಐಜಿಪಿ ಡಾ.ರವಿಕಾಂತೇ ಗೌಡ ಭಾಗಿ
ರಾಜ್ಯದಲ್ಲಿ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶಿವಮೊಗ್ಗ ನಗರದ ವಿವಿಧ ಪದವಿ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ಶಿಕ್ಷಣ ಪಡೆಯುತ್ತಿರುವಂತಹ ಒಟ್ಟು 13 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಒಳಾಂಗಣ ಮತ್ತು ಹೊರಾಂಗಣ ತರಬೇತಿಗಳಿಂದ ಆರು ದಿನಗಳಿಂದ ನೀಡಲಾಗಿದೆ.ಇದರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಶನಿವಾರ ನಗರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಐಜಿಪಿ ಡಾ.ರವಿಕಾಂತ್ ಗೌಡ ಭಾಗವಹಿಸಿದರು ವಿದ್ಯಾರ್ಥಿಗಳಿಗೆ ಪ್ರಶಂಸನ ಪತ್ರ ನೀಡಿ ಗೌರವಿಸಿದರು.