ಕುರುಗೊಡು: ಟಿಬಿ ಡ್ಯಾಂ ಅಣೆಕಟ್ಟು ಸುರಕ್ಷಿತ ದೃಷ್ಟಿಯಿಂದ ಬದಲಾವಣೆ ಅಗತ್ಯ, ಶಾಸಕ ಗಣೇಶ್
ನ.5,ಬುಧವಾರ ಮಧ್ಯಾಹ್ನ 2ಗಂಟೆಗೆ ಕುರುಗೋಡಿನಲ್ಲಿ ಎರಡನೇ ಬೆಳೆಗೆ ನೀರು ಒದಗಿಸಿ ಎಂದು ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ಮನವಿಗೆ ಹೇಳಿಕೆ ನೀಡಿರುವ ಶಾಸಕ ಗಣೇಶ್, ನಮ್ಮ ತುಂಗಭದ್ರಾ ಅಣೆಕಟ್ಟು ತುಂಬಾ ಹಳೆಯದ್ದು ಗೇಟ್ ಗಳು ಕೂಡ ಶಿಥಿಲಗೊಂಡಿದ್ದು ರೈತರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಒಂದು ಬೆಳೆ ಚಿಂತೆ ಬಿಡಿ ಸುರಕ್ಷಿತ ದೃಷ್ಟಿಯಿಂದ ಅಣೆಕಟ್ಟು ಗೇಟ್ ಗಳ ಬದಲಾವಣೆಗೆ ತಜ್ಞರು ಹೇಳಿದ್ದಾರೆ ಅದಕ್ಕನುಗುಣವಾಗಿ ಬದಲಾವಣೆ ಆಗಬೇಕಾಗಿದೆ ಒಂದು ದಿನದ ಹರ್ಷದ ಊಟಕ್ಕಿಂತ ವರುಷದ ಊಟ ಮುಖ್ಯ ಎನ್ನುವ ಮೂಲಕ ಎರಡನೇ ಬೆಳೆಗೆ ನೀರಿಲ್ಲ ಎಂದು ಪರೋಕ್ಷವಾಗಿ ಹೇಳಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೈಲೂರು ಗ್ರಾಮಸ್ಥರು ಇದ್ದರು.