ಕಂಪ್ಲಿ: ಮಾರುತಿ ನಗರದಲ್ಲಿ ಗುಡಿಸಲು ಬೆಂಕಿ ಅವಘಡ : ಮನೆ ಸಾಮಗ್ರಿಗಳ ಸಂಪೂರ್ಣ ಭಸ್ಮ
Kampli, Ballari | Nov 18, 2025 ಕಂಪ್ಲಿ ನಗರದ ಮಾರುತಿ ನಗರದ ವಡ್ಡರ ಹನುಮಂತಮ್ಮ ಅವರ ಗುಡಿಸಲು ಮನೆಗೆ ನ.18,ಮಂಗಳವಾರ ಸಂಜೆ 5 ಗಂಟೆಗೆ ಅಕಸ್ಮಾತ್ ಬೆಂಕಿ ತಗುಲಿ, ಸಂಪೂರ್ಣ ಸಮಾಗ್ರಿಗಳು ಸುಟ್ಟು ಕರಕಲಾಗಿದೆ. ಮನೆಯಲ್ಲಿ ಯಾರೂ ಇರದ ಕಾರಣ ದೊಡ್ಡ ದುರಂತ ತಪ್ಪಿದೆ. ಬೆಂಕಿ ಅವಘಡದಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಮನೆ ಬಳಿಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಹೆಚ್ಚಿನ ಸಾಮಾನುಗಳನ್ನು ಉಳಿಸಲು ಸಾಧ್ಯವಾಗಿಲ್ಲ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ