ಕಲಬುರಗಿ ನಗರದ ರಿಂಗ್ ರೋಡ್ ಶಾ ಜೀಲಾನಿ ಕ್ರಾಸ್ ಬಳಿ ಎರಡು ದಿನಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಟಿಪ್ಪರ್ ವಾಹನ ಹಾಯ್ದು 19 ವರ್ಷದ ಪಿ.ಯು. ಸೈನ್ಸ್ ಪ್ರತಿಭಾನ್ವಿತ ವಿದ್ಯಾರ್ಥಿನಿ ತನ್ನ ಒಂದು ಕಾಲು ಕಳೆದುಕೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಂತಾಜನ ಸ್ಥೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ದಿನ ಸ್ಥಳಕ್ಕೆ ಭೇಟಿ ನೀಡಿದ್ದ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ, ಇಂದು ಶೆನಿವಾರ 1 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿಯ ಕುಟುಂಬಕ್ಕೆ ವಯಕ್ತಿಕ ಧನ ಸಹಾಯ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದರು. ಆಸ್ಪತ್ರೆ ಖರ್ಚು ಹಾಗೂ ಜೀವನಾಧಾರಕ್ಕಾಗಿ ಪರದಾಡುತ್ತಿರುವ ಕುಟುಂಬಕ್ಕೆ ಸರ್ಕಾರ ಹಾಗೂ ಜಿಲ್ಲಾಢಳಿತ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು...