ಬೆಂಗಳೂರು ಉತ್ತರ: ರಾಜಾಜಿನಗರದ ಫಾಸ್ಟ್ ಫುಡ್ ಸೆಂಟರ್‌ನಲ್ಲಿ ಕಿಡಿಗೇಡಿಯ ದಾಂಧಲೆ
ಫಾಸ್ಟ್ ಫುಡ್ ಸೆಂಟರ್‌ಗೆ ಬಂದ ಕಿಡಿಗೇಡಿಯೊಬ್ಬ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿರುವ ಘಟನೆ ಸೆಪ್ಟೆಂಬರ್ 21ರಂದು ಭಾನುವಾರ ರಾತ್ರಿ ರಾಜಾಜಿನಗರದಲ್ಲಿ ನಡೆದಿದೆ.ರಾತ್ರಿ 9:30ರ ಸುಮಾರಿಗೆ ರಾಜಾಜಿನಗರದ ಅನ್ನಪೂರ್ಣೇಶ್ವರಿ ಫಾಸ್ಟ್ ಫುಡ್ ಸೆಂಟರ್‌ನಲ್ಲಿ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ಬಂದಿದ್ದ ಆರೋಪಿ, 'ಏನ್ ಗುರಾಯಿಸ್ತೀಯಾ?' ಎನ್ನುತ್ತಾ ಗ್ರಾಹಕರಿಗೆ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದಾನೆ.ಇತರೆ ಗ್ರಾಹಕರಿಗೆ ತೊಂದರೆ ಮಾಡದಂತೆ ಸಿಬ್ಬಂದಿಗಳು ಮನವಿ ಮಾಡಿದರೂ ಸಹ ಜೀವ ಬೆದರಿಕೆ ಹಾಕುತ್ತ ಅಸಭ್ಯವಾಗಿ ಮಾತನಾಡಿದ್ದಾನೆ. ಆರೋಪಿಯ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ