ಕೋಲಾರ: ನಗರದಲ್ಲಿ ಇ-ಖಾತಾ ಅಭಿಯಾನ ಮತ್ತು ಕಾನೂನು ಅರಿವು ಕಾರ್ಯಕ್ರಮ
Kolar, Kolar | Aug 12, 2025 ಇ-ಖಾತಾ ಅಭಿಯಾನದ ಬಗ್ಗೆ ಕಾನೂನಿನ ಸಲಹೆಯನ್ನು ನೀಡಿ ಈ ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ರೀತಿಯ ತೊಂದರೆಯಿದ್ದಲ್ಲಿ ತಮ್ಮ ಗಮನಕ್ಕೆ ಸೂಚಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ನಟೇಶ ಅವರು ತಿಳಿಸಿದರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೋಲಾರ ಹಾಗೂ ನಗರ ಸಭಾ ಕಾರ್ಯಾಲಯ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಮಂಗಳವಾರ ಮಧ್ಯಾಹ್ನ 3.30ರ ಕೋಲಾರ ನಗರ ಸಭಾ ಕಾರ್ಯಾಲಯದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದರು.