ಮಹದೇವಪುರದಲ್ಲಿ ರಸ್ತೆ ಗುಂಡಿಗೆ ಯುವಕ ಬಲಿ ಆಗಿದ್ದಾನೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ತಡರಾತ್ರಿ ಬೈಕ್ ಅಲ್ಲಿ ಹೋಗುತ್ತಿದ್ದಾಗ ಗುಂಡಿ ತಪ್ಪಿಸಲು ಹೋಗಿ ಅಂಕುಶ್ ಎನ್ನುವ ಯುವಕ ಬಲಿ ಆಗಿದ್ದಾನೆ. ಸ್ಥಳೀಯರು ಹೇಳುವ ಪ್ರಕಾರ ಹಲವು ಸಲ ರಸ್ತೆ ದುರಸ್ತಿಗೆ ಆಗ್ರಹಿಸಿದರು ಪ್ರಯೋಜನ ಆಗಿಲ್ಲ ಅಂತ ಆಕ್ರೋಶ ವ್ಯಕ್ತ ಆಗಿದೆ. ಡಿಸೆಂಬರ್ 10ರಂದು ಈ ಘಟನೆ ಬೆಳಕಿಗೆ ಬಂದಿದೆ