ಚಿತ್ರದುರ್ಗ: ನೆರೆಯಿಂದ ಬದಲಾಗದ ಪಿ.ಓಬಣ್ಣನಹಳ್ಳಿ ಗ್ರಾಮ: ವಸತಿ ಸೌಕರ್ಯಕ್ಕೆ ಗ್ರಾಮಸ್ಥರ ಒತ್ತಾಯ
ರಾತ್ರೋ ರಾತ್ರಿ ಪ್ರವಾಹಕ್ಕೆ ಸಿಲುಕಿ ನಲುಗಿದ್ದ ಗ್ರಾಮಕ್ಕೀಗಾ ಕಾಯಕಲ್ಪ ಸಿಗಬೇಕಿದೆ. ಧಾರಾಕಾರ ಮಳೆಗೆ ತತ್ತರಿಸಿದ್ದ ಊರಿನ ಜನರಿಗೆ ಸೂರಿನ ಭಾಗ್ಯ ಇದುವರೆಗೂ ಸಿಕ್ಕಿಲ್ಲ. ಭರವಸೆ ಕೊಟ್ಟು ಎರಡು ವರ್ಷ ಕಳೆದರೂ ಗ್ರಾಮದತ್ತ ಜನಪ್ರತಿನಿಧಿಗಳು ತಿರುಗಿಯೂ ಕೂಡಾ ನೋಡಿಲ್ಲ. ಹೌದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪಿ.ಓಬಣ್ಣನಹಳ್ಳಿ ಸಧ್ಯದ ಪರಿಸ್ಥಿತಿ ಇದಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಜೋಗಿಮಟ್ಟಿ ಗುಡ್ಡದಿಂದ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿ, ಈಡೀ ಗ್ರಾಮಕ್ಕೆ ಗ್ರಾಮವೇ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥವಾಗಿತ್ತು. ರಾತ್ರೋ ರಾತ್ರಿ ಮಹಿಳೆಯರು, ಮಕ್ಕಳನ್ನ ಬೇರೆ ಕಡೆ ಶಿಪ್ಟ್ ಮಾಡಲಾಗಿತ್ತು.