ಕಂಪ್ಲಿ: ಸೋಮಪ್ಪನ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ
Kampli, Ballari | Nov 20, 2025 ಪಟ್ಟಣದ ಪ್ರಸಿದ್ಧ ಸೋಮಪ್ಪನ ಕೆರೆಯಲ್ಲಿ ಬುಧವಾರ (ನ.19) ಸಂಜೆ 5 ಗಂಟೆಯ ಸುಮಾರಿಗೆ ಮೊಸಳೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಪ್ರತಿದಿನ ನೂರಾರು ಜನರು ಕೆರೆ ಸುತ್ತ ಮುತ್ತ ಬೆಳಗ್ಗೆ–ಸಂಜೆ ವ್ಯಾಯಾಮಕ್ಕಾಗಿ ಬರುತ್ತಾರೆ. ಜೊತೆಗೆ ಮಕ್ಕಳು ಆಟವಾಡಲು, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ತೆರಳಲು ಬಳಸುವ ಸ್ಥಳವೂ ಆಗಿರುವುದರಿಂದ ಮೊಸಳೆ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಆತಂಕ ಹುಟ್ಟಿಸಿದೆ. ಕಳೆದ ವರ್ಷವೂ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಮೀನುಗಾರರು ಹಲವು ದಿನಗಳ ಕಾಲ ಶ್ರಮಿಸಿದ್ದ