ಸಿರವಾರ: ಮಂದಗತಿಯಲ್ಲಿ ನಡೆದ ಹೆದ್ದಾರಿ ಕಾಮಗಾರಿ ಜನ ವಾಹನ ಸವಾರರ ಪರದಾಟ
Sirwar, Raichur | Oct 31, 2025 ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪಟ್ಟಣದ ಮಧ್ಯದಲ್ಲಿ ನಡೆಯುತ್ತಿರುವ ನೆಲೆಯಲ್ಲಿ, ರಸ್ತೆ ಆಗಿದ್ದು ಮಂದಗತಿಯಲ್ಲಿ ಕಾಮಗಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮಧ್ಯದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ರಸ್ತೆ ಎರಡೂ ಬದಿಯಲ್ಲಿ ಪೈಪ್ ಲೈನ್ ಗಾಗಿ ಗುಂಡಿ ಅಗೆಯಲಾಗಿದೆ, ಇದರ ಮಧ್ಯ ವಾಹನ ಸವಾರರು ವಾಹನ ಚಲಾಯಿಸಲು ಹಾರ ಸಾಹಸ ಪಡಬೇಕಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎನ್ನುವುದು ಜನರ ಒತ್ತಾಯಚಾಗಿದೆ.