ಇಳಕಲ್: ನಗರದ ಎಸ್.ಆರ್.ಕಂಠಿ ವೃತ್ತ ಈಗ ಗುಂಡಿಗಳ ಸುತ್ತ
Ilkal, Bagalkot | Oct 28, 2025 ಅ.೨೮ ಸಾಯಂಕಾಲ ೪ ಗಂಟೆಯ ಸಂದರ್ಭ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಹೃದಯ ಭಾಗವಾಗಿರುವ ದಿ.ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ವೃತ್ತದಲ್ಲಿನ ರಸ್ತೆ, ಗುಂಡಿಗಳ ರಸ್ತೆಯಾಗಿ ನಿಮಾರ್ಣವಾಗಿ, ಕಂಠಿ ವೃತ್ತ ಈಗ ಗುಂಡಿಗಳ ಸುತ್ತ ಎನ್ನಿಸಿಕೊಳ್ಳುವಂತಾಗಿದೆ. ಈ ಹಿಂದೆ ನಗರದ ಚಿತ್ತರಗಿ ಶ್ರೀವಿಜಯ ಮಹಾಂತೇಶ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಇಲ್ಲಿನ ಗುಂಡಿಗಳಿಗೆ ಕಾಟಾಚಾರಕ್ಕೆ ತೆಪ್ಪೆ ಹಚ್ಚುವ ಕೆಲಸವನ್ನು ಮಾಡಲಾಗಿತ್ತು. ಎರಡು ಮೂರು ತಿಂಗಳಿಗೆ ಮತ್ತೇ ಗುಂಡಿಗಳ ಎದ್ದು ನಿಂತಿವೆ. ಮಳೆ ಸುರಿದರೇ ಸಾಕು ಗುಂಡಿಗಳಲ್ಲಿ ಮಳೆ ನೀರು ನಿಂತುಕೊAಡು ಸಣ್ಣ ಸಣ್ಣ ಕೆರೆಗಳಂತೆ ಕಾಣತೊಡಗಿವೆ. ಆದಷ್ಟು ಬೇಗನೆ ನಗರಸಭೆ ಅಧಿಕಾರಿಗಳು ಗುಂಡಿಗಳನ್ನು ಮಚ್ಚುವ ಕಾರ್ಯವನ್ನು ಶೀಘ್ರವೇ ಮಾಡಿ ಮುಂದಾಗಬಹುದಾದ ಅನಾಹುತಗಳನ್ನು