ಇಲ್ಲಿನ ಜನವಸತಿ ಪ್ರದೇಶದಲ್ಲಿ ಹಲವು ವರ್ಷಗಳಿಂದ ಚರಂಡಿಯಿಲ್ಲದ ಕಾರಣ ನಿವಾಸಿಗಳ ಸ್ವಂತ ಹಣದಲ್ಲಿ ಚರಂಡಿ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಈಡಿಗರ ಸಮುದಾಯ ಭವನದ ವಸತಿ ಬಡಾವಣೆಯಲ್ಲಿನ ನಿವಾಸಿಗಳು ಮನೆಕಂದಾಯ ನೀರಿನ ತೆರಿಗೆ. ಮನೆ ಕಟ್ಟಲು ನಗರಸಭೆಯಿಂದ ಪರವಾನಿಗೆ ಪಡೆದರೂ ಸಹ ನಗರಸಭೆ ಇಲ್ಲಿನ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು ವಿಫಲವಾಗಿದ್ದು ಚರಂಡಿ ನಿರ್ಮಾಣ ಮಾಡಿಸುವಂತೆ ನಗರಸಭೆ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ.ಕೊನೆಗೆ ಇಲ್ಲಿನ ನಿವಾಸಿಗಳ ಚಂದಾ ಹಾಕಿಕೊಂಡು ಸುಮಾರು 80 ಮೀಟರ್ ಉದ್ದದ ಎರಡು ಲಕ್ಷದ ಐವತ್ತು ಸಾವಿರ ವೆಚ್ಚದ ಗುಣ ಮಟ್ಟದ ಬಾಕ್ಸ್ ಚರಂಡಿ ನಿಮಾರ್ಣಕ್ಕೆ ಮುಂದಾಗಿದ್ದಾರೆ.