ಕಲಬುರಗಿ : ಯಾದಗಿರಿಯಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಕಲಬುರಗಿ ಜಿಲ್ಲೆ ಶಹಬಾದ್ ಮೂಲದ ಅಂಜಲಿ ಕಂಬಾನುರ್ ಚಿಕಿತ್ಸೆ ಫಲಿಸದೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು, ನ15 ರಂದು ಬೆಳಗ್ಗೆ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಯಾದಗಿರಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಡಿಎ ಆಗಿದ್ದ ಮಾಜಿ ನಗರಸಭೆ ಅಧ್ಯಕ್ಷೆ ಅಂಜಲಿ ಕಂಬಾನುರ್ ಮೇಲೆ ನ12 ರಂದು ಕಚೇರಿಗೆ ತೆರಳತಿದ್ದ ವೇಳೆ ಕಾರಿನ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದರು.