ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ರಾಜಕಾರಣಿಗಳು, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅಗಲಿಕೆಯ ಸುದ್ದಿ ಅತೀವ ಆಘಾತವನ್ನು ತಂದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭಾನುವಾರ ರಾತ್ರಿ 7 ಗಂಟೆಗೆ ಸಂತಾಪ ಸೂಚಿಸಿದ್ದಾರೆ. ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಇಡೀ ಸಮಾಜಕ್ಕೆ ಅವರ ನೇತೃತ್ವ, ಮಾರ್ಗದರ್ಶನ, ಅವರ ಕೊಡುಗೆ ಅಸಾಧಾರಣವಾದದ್ದು. ನಾಡಿನ ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಪಕ್ಷಾತೀತವಾಗಿ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಅವರ ಅಗಲಿಕೆಯಿಂದ ಸಮಾಜ ತನ್ನ ಮೇರು ನಾಯಕನನ್ನು ಕಳೆದುಕೊಂಡಿದೆ.