ಕಲಬುರಗಿ: ನಗರದ ಎಮ್.ಬಿ ನಗರದಲ್ಲಿ ಅಗ್ನಿ ಅವಘಡ: ಹೊತ್ತಿಯುರಿದ L & T ಕುಡಿಯುವ ನೀರಿನ ಪೈಪ್ಗಳು
ಕಲಬುರಗಿ : ಕಲಬುರಗಿ ನಗರದ ಎಂಬಿ ನಗರ ಬಡಾವಣೆಯಲ್ಲಿ ಕಸಕ್ಕೆ ಬೆಂಕಿ ಹಚ್ಚಿದ ಪರಿಣಾಮ, ಎಲ್ & ಟಿ ಕಂಪನಿಗೆ ಸೇರಿದ್ದ ರಸ್ತೆ ಪಕ್ಕದಲ್ಲಿದ್ದ ರಾಶಿರಾಶಿ ಕುಡಿಯುವ ನೀರಿನ ಪೈಪ್ಗಳು ಬೆಂಕಿಗಾಹುತಿಯಾದ ಘಟನೆ ಡಿಸೆಂಬರ್ 13 ರಂದು ಮಧ್ಯಾನ 3.30 ಕ್ಕೆ ಕಲಬುರಗಿ ನಗರದ ಬಸವೇಶ್ವರ ಕಾಲೋನಿಯಲ್ಲಿ ನಡೆದಿದೆ.. ರಸ್ತೆ ಬದಿಯ ಕಸದ ರಾಶಿಗೆ ಬೆಂಕಿ ಹಚ್ಚಲಾಗಿತ್ತುಂ ಕ್ಷಣಾರ್ಧದಲ್ಲಿ ಸಮೀಪದಲ್ಲಿದ್ದ ಪೈಪ್ಗಳ ರಾಶಿಗೆ ಬೆಂಕಿ ವ್ಯಾಪಿಸಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್ಗಳು ಸುಟ್ಟು ಕರಕಲಾಗಿವೆ.. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದು, ಎಂಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ