ಬೆಳಗಾವಿ ನಂದಿಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ರಾಜಹಂಸಗಡ,ನಂದಿಹಳ್ಳಿ, ಗರ್ಲಗುಂಜಿ ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿದ್ದು ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದ್ದು ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ ಮಾಡಿದ್ದು ರಾಜಹಂಸಗಡ ಪ್ರದೇಶದಲ್ಲಿ ಹೆಚ್ಚಾಗಿ ನವಿಲುಗಳು ಓಡಾಟ ಇವೆ ಅವುಗಳನ್ನು ತಿನ್ನಲು ಚಿರತೆ ಬರಬರುತ್ತೆ ಎಂದು ಅಧಿಕಾರಿಗಳಿಗೆ ನಿವಾಸಿಗಳ ಮಾಹಿತಿ ನೀಡಿದ್ದು ಚಿರತೆ ಪ್ರತ್ಯಕ್ಷ ಮಾಹಿತಿ ಹಿನ್ನೆಲೆ ಬೆಳಗಾವಿ ಖಾನಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಶನಿವಾರ 11 ಗಂಟೆಗೆ ಭೇಟಿ,ಪರಿಶೀಲನೆ ನಡೆಸಿದರು ನಾಗರಿಕರು ಜಾಗರೂಕತೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಸೂಚನೆ ನೀಡಿದ್ದು ಒಂಟಿಯಾಗಿ ಜಮೀನಿಗೆ ಹೋಗದಂತೆ ಓಡಾಡದಂತೆ ಸಾರ್ವಜನಿಕರಲ್ಲಿ ಅರಣ್ಯ ಇಲಾಖೆ ಮನವಿ.