ಭಾನುವಾರ ಬೆಳಿಗ್ಗೆ 10 ಗಂಟೆಗೆ ಚಿತ್ರದುರ್ಗ ನಗರದ ಹೊರ ಭಾಗದಲ್ಲಿ 1008 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದ ವರನೊಬ್ಬ ಕುಸಿದು ಬಿದ್ದು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ವೇಧಿಕೆ ಮೇಲ್ಬಾಗದಲ್ಲಿ ಮದುವೆಗೆ ಸಜ್ಜಾಗಿದ್ದ ವರ ತಲೆ ಸುತ್ತಿ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳದಲ್ಲೇ ಇದ್ದ ಸಂಬಂಧಿಕರು ಉಪಚರಿಸಿದ್ದಾರೆ. ಅಲ್ಲದೆ ಮದುವೆಗೆ ರೆಡಿಯಾಗಿದ್ದ ವಧು ಕೂಡ ಆತಂಕಗೊಂಡು, ಕಣ್ಣಿರಿಟ್ಟಿದ್ದಾಳೆ. ಅಲ್ಲದೆ ಮದುವೆ ಸ್ಥಳದಲ್ಲಿ ಮುಖಕ್ಕೆ ನೀರು ಹಾಕಿ, ಉಪಚರಿಸುವ ಮೂಲಕ ಸಂಬಂಧಿಕರು ಸಹಾಯ ಮಾಡಿದ್ದಾರೆ