ಮೆಗಾಫುಡ್ ಪಾರ್ಕ್ ಕಂಪೆನಿಯಿಂದ ರೈತರಿಗೆ ಕಿರುಕುಳ:ಆರೋಪ ಅಧಿಕಾರಿಗಳ ಜತೆ ಸ್ಥಳಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ: ಕಂಪೆನಿ ಎಂಡಿಗೆ ತರಾಟೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಣ್ಣೆನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮೆಗಾ ಫುಡ್ ಪಾರ್ಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯದೇವ್ ಅವರು ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗಿ ಗಳಿಗೆ ಉದ್ಯೋಗ ನೀಡುವ ಬದಲು ಅಕ್ಕಪಕ್ಕದ ರೈತರಿಂದ ಭೂಮಿ ಖರೀದಿಸುವ ಕೆಲಸದಲ್ಲಿ ನಿರತರಾಗಿದ್ದು ರಿಯಲ್ ಎಸ್ಟೇಟ್ ಉದ್ಯಮ ಮಾಡು ತ್ತಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಗಂಭೀರ ಆರೋಪ ಮಾಡಿದರು. ಮೆಗಾಫುಡ್ ಪಾರ್ಕ್ ಸಂಸ್ಥೆಯವರು ರೈತರಿಗೆ ಕಿರುಕುಳ ನೀಡುತ್ತಿದ್ದು, ಸ್ಥಳೀಯ ರೈತರು ತಮ್ಮ ಜಮೀನುಗಳಿಗೆ, ಕೆರೆಗೆ ದೇ