ಚಿತ್ರದುರ್ಗ: ನಗರದಲ್ಲಿ ನಡೆದ ಸ್ವದೇಶೀ ಮೇಳದಲ್ಲಿ ಗಮನ ಸೆಳೆದ ದೇಸಿ ಹಸುಗಳ ಪ್ರದರ್ಶನ
ಚಿತ್ರದುರ್ಗ:-ಸ್ವಾವಲಂಬನೆಯ ಪರಿಕಲ್ಪನೆಯಡಿ ಕರ್ನಾಟಕ ಸ್ವದೇಶಿ ಜಾಗರಣ ಮಂಚ್ ನಿಂದ ಆಯೋಜಿಸಲಾಗಿದ್ದ ಮಧ್ಯ ಕರ್ನಾಟಕ ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಐದು ದಿನಗಳ ಕಾಲ ನಡೆದ ಪ್ರಪ್ರಥಮ ಬೃಹತ್ ಸ್ವದೇಶಿ ಮೇಳ ಇಂದು ಮುಕ್ತಾಯಗೊಂಡಿದೆ. ಚಿತ್ರದುರ್ಗ ನಗರದ ಜಗದ್ಗುರು ಶ್ರೀಜಯದೇವ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿಸುಮಾರು 200ಕ್ಕೂ ಹೆಚ್ಚು ಅತ್ಯಾಧುನಿಕ ಹಾಗೂ ಆಕರ್ಷಕ ಮಳಿಗೆ ಹಾಕಲಾಗಿತ್ತು,ವೇದಿಕೆ ಕಾರ್ಯಕ್ರಮಕ್ಕಾಗಿ ಜರ್ಮನ್ ಟೆಂಟ್ ಅಳವಡಿಸಿ ಸ್ವದೇಶಿ ಮೇಳ ನಡೆಸಲಾಯಿತು. ಗುಡಿ ಕೈಗಾರಿಕೆಗಳನ್ನು ಉತ್ತೇಜಿಸುವುದು ಸ್ವದೇಶಿ ಮೇಳದ ಮುಖ್ಯ ಉದ್ದೇಶವಾಗಿದ್ದು, ನೈಸರ್ಗಿಕ ಹಾಗೂ ಸಾವಯವ