ಕಾರಟಗಿ: ಪಾಕ್ ಪರವಾಗಿ ಎಲ್ಲೇ ಘೋಷಣೆ ಕೂಗಿದ್ರು ಒದ್ದು ಒಳಗೆ ಹಾಕ್ತಿವಿ ಕಾರಟಗಿಯಲ್ಲಿ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಪಾಕ್ ಪರವಾಗಿ ದೇಶದ ಯಾವುದೇ ಮೂಲೆಯಲ್ಲಿ ಘೋಷಣೆಯನ್ನು ಕೂಗಿದ್ರೂ, ಅವರನ್ನು ಒದ್ದು ಒಳಗೆ ಹಾಕ್ತಿವಿ. ಅಂತವರನ್ನು ಸಮರ್ಥನೆ ಮಾಡಿಕೊಳ್ಳುವುದೇ ಇಲ್ಲ ಎಂದು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ರವಿವಾರ ಸಾಯಂಕಾಲ 4:00 ಸುಮಾರಿಗೆ ಸಚಿವ ಶಿವರಾಜ್ ತಂಗಡಗಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಮ್ಮ ದೇಶಭಕ್ತಿಯನ್ನು ಬಿಜೆಪಿಯವರ ಬಳಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ವಿರುದ್ಧವು ಕೂಡ ಕಿಡಿ ಕಾರಿದ್ದಾರೆ...