ಶ್ರೀರಂಗಪಟ್ಟಣದಲ್ಲಿ ಅಂಗಾಗ ದಾನ, ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು. ಡಿ.13 ರಂದು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕ ಯಶ್ವಂತ್ ಅವರ ಪೋಷಕರು, ಮಗನ ದೇಹದ ಹಲವು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಶ್ವಂತ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ತಿಳಿಸಿದಾಗ ಅವರ ಅಂಗಾಂಗಳು ಹಲವರಿಗೆ ಜೀವದಾನವಾಗಲಿ ಎಂದು ಪೋಷಕರು ನಿರ್ಧರಿಸಿದರು. ಈ ಮೂಲಕ ಮಗನ ಸಾವಿನ ನೋವಿನಲ್ಲೂ ಅವರು ಮಾನವೀಯತೆ