ಕೋಲಿ ಕಬ್ಬಲಿಗ ಸಮುದಾಯ ಎಸ್ಟಿ ಪಟ್ಟಿಗೆ ಸೇರ್ಪಡೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುವಾಗ ಆಕಸ್ಮಾತ ಆಗಮಿಸಿದ ಅಂಬುಲೇನ್ಸ್ ಗೆ ದಾರಿ ಮಾಡಿಕೊಟ್ಟು ಪ್ರತಿಭಟನೆ ನಡುವೆಯೂ ಮಾನವಿಯತೆ ಮೇರೆದಿದ್ದಾರೆ. ಸೋಮವಾರ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿವಿಧ ಮಠಾಧೀಶರು, ರಾಜಕೀಯ ಮುಖಂಡರ ನೇತೃತ್ವದಲ್ಲಿ ಕೋಲಿ ಕಬ್ಬಲಿಗ ಸದವಾಭಿಮಾನಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲೆಯ ವಿವಿಧಡೆಯಿಂದ ಅಪಾರ ಪ್ರಮಾಣದ ಸಮುದಾಯದ ಜನರು ಆಗಮಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹೋರಾದ ವೇಳೆ ಸ್ವಯಂ ಪ್ರೇರಣೆಯಿಂದ ಜನರು ಅಂಬುಲೇನ್ಸ್ಗೆ ದಾರಿ ಮಾಡಿಕೊಟ್ಟು ಮಾನವಿಯ ಮೌಲ್ಯ ಸಾರಿದರು...