ಹೆಬ್ರಿ: ಹೆಬ್ರಿ ಹಾಲು ಉತ್ಪಾದಕರ ಸಹಕಾರಿಯ ಆಡಳಿತ ಮಂಡಳಿಯನ್ನು ಕೋರ್ಟ್ ರದ್ದು ಮಾಡಿದೆ: ಪಟ್ಟಣದಲ್ಲಿ ಸಂಘದ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ
Hebri, Udupi | Apr 8, 2024 ಹೆಬ್ರಿ ಹಾಲು ಉತ್ಪಾದಕರ ಸಹಕಾರಿಯ ಆಡಳಿತ ಮಂಡಳಿಯನ್ನು ನ್ಯಾಯಾಲಯ ರದ್ದು ಮಾಡಿದೆ ಎಂದು ಸಂಘದ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು. ಹೆಬ್ರಿ ತಾಲ್ಲೂಕಿನ ಚೈತನ್ಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ ಕಾನೂನು ಬಾಹಿರವಾಗಿದ್ದು, ಸರ್ಕಾರ ಸಹಕಾರ ಕಾಯ್ದೆ ಕಲಂ1959 ರ ಕಲಂ 70/1/2 ರ ಪ್ರಕಾರ ನಮ್ಮ ಮನವಿ ಮತ್ತು ಬೇಡಿಕೆಯನ್ನು ಕುಂದಾಪುರ ವಿಭಾಗೀಯ ಸಹಕಾರಿ ನ್ಯಾಯಾಲಯ ಏಪ್ರಿಲ್ 02 ರಂದು ಪುರಸ್ಕರಿಸಿ ಆಡಳಿತ ಮಂಡಳಿಯನ್ನು ರದ್ದುಗೊಳಿಸಿದೆ ಎಂದರು.