ಬಳ್ಳಾರಿ: ಅಲ್ಲಿಪುರದ ಹೆಚ್.ಎಲ್.ಸಿ ಕೆನಾಲ್ಗೆ ಸ್ಕಿಡ್ ಬಿದ್ದ ಕಾರನ್ನು ಮೇಲಕ್ಕೆ ಎತ್ತುವ ಕಾರ್ಯ
ಶಿಫ್ಟ್ ಕಾರೊಂದು ಸ್ಕಿಡ್ ಆಗಿ ನೀರಿಗೆ ಬಿದ್ದು ಮುಳುಗಿರುವ ಘಟನೆ ಬಳ್ಳಾರಿಯ ಅಲ್ಲಿಪುರ HLC ಕೆನಾಲ್ ನಲ್ಲಿ ನಡೆದಿದೆ. ಮಾಹಿತಿ ಪ್ರಕಾರ, ಕೆನಾಲ್ ನಲ್ಲಿ ಕಾರನ್ನು ವಾಶ್ ಮಾಡುವ ವೇಳೆಯಲ್ಲಿ, ಕಾರು ನಿಯಂತ್ರಣ ತಪ್ಪಿ ಕೆನಾಲ್ಗೆ ಉರುಳಿದೆ, ನೋಡು ನೋಡುತ್ತಿದ್ದಂತೆ ಕಾರು ಸಂಪೂರ್ಣವಾಗಿ ನೀರಲ್ಲಿ ಮುಳುಗಿದೆ, ನ.16 ಭಾನುವಾರ ಮಧ್ಯಾಹ್ನ 2ಗಂಟೆಗೆ ಕ್ರೇನ್ ಮೂಲಕ ಕೆನಾಲ್ ನಿಂದ ಕಾರನ್ನು ಮೇಲಕ್ಕೆ ಎತ್ತುವ ಕಾರ್ಯ ನಡೆಸಿದರು. ಘಟನೆ ಸಂದರ್ಭದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ ಎಂಬುದು ಖಚಿತವಾಗಿದೆ.