ಹೊಸನಗರ: ಹೊಸನಗರದಲ್ಲಿ ಹೃದಯಾಘಾತದಿಂದ ಬಿಜೆಪಿ ನಾಯಕ ನಿಧನ
ಹೊಸನಗರ ತಾಲೂಕು ಬಿಜೆಪಿ ಅಧ್ಯಕ್ಷ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಮತ್ತಿಮನೆ ಸುಬ್ರಹ್ಮಣ್ಯ ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಏಕಾಏಕಿ ಅಸ್ವಸ್ಥರಾದ ಮತ್ತಿಮನೆ ಸುಬ್ರಹ್ಮಣ್ಯ ಅವರನ್ನು ಕುಟುಂಬ ಸದಸ್ಯರು ತಕ್ಷಣವೇ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಬಿಜೆಪಿ ಸಕ್ರಿಯ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು.