ತೀರ್ಥಹಳ್ಳಿ ತಾಲೂಕಿನಲ್ಲಿ ಅಡಿಕೆ ಕೊನೆ ಕೆಲಸಕ್ಕೆ ಬಂದ ವ್ಯಕ್ತಿ ಕಾಣೆಯಾಗಿದ್ದು ಮಾಳೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಪ್ರಕರಣ ದಾಖಲಾಗಿದೆ. ಮಲ್ಲಿಕಾರ್ಜುನ ಎಂಬ ವ್ಯಕ್ತಿ ಡಿ. 10 ರಂದು ತೀರ್ಥಹಳ್ಳಿಯಿಂದ ಬೇರೆಯವರ ಮೊಬೈಲ್ ಸಂಖ್ಯೆಯಿಂದ ಅವರ ಅಕ್ಕ ಲಕ್ಷ್ಮೀ ಯವರಿಗೆ ಕರೆ ಮಾಡಿ ಹಣ ಕೇಳಿದ್ದು ಅದಾದ ಬಳಿಕ ಕರೆ ಮಾಡದಿರುವುದು ಜೊತೆಗೆ ಮನೆಗೆ ಬಾರದ ಹಿನ್ನಲೆ ಗಾಬರಿಗೊಂಡ ಮನೆಯವರು ಪೊಲೀಸ್ ಠಾಣೆಗೆ ಹುಡುಕಿಕೊಡುವಂತೆ ದೂರು ಸಲ್ಲಿಸಿದ್ದಾರೆ. ಎಲ್ಲಿಯಾದರೂ ಕಂಡರೆ ಕೂಡಲೇ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಮಾಹಿತಿ ನೀಡುವಂತೆ ಮಾಳೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.