ಚಿಕ್ಕಬಳ್ಳಾಪುರ ನಗರದ ಭುವನೇಶ್ವರಿ ವೃತ್ತದಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬಿಜೆಪಿ ಯುವ ಕಾರ್ಯಕರ್ತರು ಸೇರಿದಂತೆ ನಗರದ ಜನತೆ ಸೇರಿ ಕಾಶ್ಮೀರದ ಪಹಲ್ಗಾಂ ನಲ್ಲಿ ಭಯೋತ್ಪಾದಕರ ಅಟ್ಟಹಾಸದಿಂದ ಮೃತಪಟ್ಟವರ ಆತ್ಮಕ್ಕೆ ಶಾಂತಿ ಬಯಸಿ ಮೊಂಬತ್ತಿ ಹತ್ತಿಸಿ ಶಾಂತಿ ಕೋರಿದರು. ಇತಂಹ ಕೃತ್ಯವನ್ನು ಮಾಡಿದ ಪಾಕಿಗಳಿಗೆ ತಕ್ಕ ಪಾಠವನ್ನು ಕಲಿಸಬೇಕಿದೆ ಎಂದು ಇದೇ ವೇಳೆ ದಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.