ಮೋನಿಕಾ ನೃತ್ಯ ಕಲಾ ಸಂಸ್ಥೆ ರಾಯಚೂರು ವತಿಯಿಂದ ಮಂಗಳವಾರ 11 ಗಂಟೆಗೆ ನಿಜಲಿಂಗಪ್ಪ ಕಾಲೋನಿ, ಮೋನಿಕಾ ನೃತ್ಯ ಕಲಾ ಸಂಸ್ಥೆಯ ಆವರಣದಲ್ಲಿ ಚಿನ್ನರ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕುಮಾರಿ ದೇವಾಂಶಿ ಅವರ ನೃತ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಕುಮಾರಿ ಪ್ರತಿಕ್ಷ ಹಾಗೂ ಸಹಸ್ರ ರಾಯಚೂರು ಇವರಿಂದ ಭರತನಾಟ್ಯ ನೃತ್ಯ, ಕುಮಾರಿ ಸಂಜನಾ ಸಂಗಡಿಗರಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಕುಮಾರಿ ಅನನ್ಯ ಮತ್ತು ಕುಮಾರಿ ಅನುಶ್ರೀ ರಾಯಚೂರು ಅವರು ಸುಮಧುರ ಗೀತ ಗಾಯನ ನೀಡಿದರು.