ಚಿತ್ರದುರ್ಗ:-ಪ್ರಗತಿಪರ ರೈತ ವೀರಭದ್ರಪ್ಪ ಇವರ ಮೇಲೆ ಅಬಕಾರಿ ಅಧಿಕಾರಿಗಳು ನಡೆಸಿರುವ ದಾಳಿ ಖಂಡಿಸಿ ಬಿಜೆಪಿ ರೈತ ಮೋರ್ಚದಿಂದ ಗುರುವಾರ ಮಧ್ಯಾಹ್ನ 12:30ಕ್ಕೆ, ಚಿತ್ರದುರ್ಗ ನಗರದಲ್ಲಿ ಎಡಿಸಿ ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ನೀಡಿದ್ದಾರೆ. ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ವಸುಂಧರ ಕೃಷಿ ಕ್ಷೇತ್ರದಲ್ಲಿ ಎಸ್.ಸಿ.ವೀರಭದಪ್ಪ ಅವರು ತೆಂಗಿನ ಮರದಿಂದ ನೀರಾ(ಕಲ್ಲರಸ) ಇಳಿಸಿ ಮಾರಾಟ ಮಾಡುತ್ತಿದ್ದಾರೆ. ಈ ಸ್ಥಳಕ್ಕೆ ಇತ್ತೀಚಿಗೆ ತೆರಳಿದ್ದ ಅಬಕಾರಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಬೆದರಿಕ ಹಾಕುತ್ತಾ ನೀರಾ ಇಳಿಸುವುದನ್ನು ನಿಲ್ಲಿಸುವಂತೆ ತಾಕೀತು ಮಾಡುತ್ತಿರುವುದು ಸರಿಯಲ್ಲ ಎಂದರು.