ಕೋಲಾರ: ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಯೋಗ ಸಾಧಕ ಡಾ. ರಾಜಕುಮಾರ್ ಹೆಸರು ನಾಮಕರಣಕ್ಕೆ ಒತ್ತಾಯ
Kolar, Kolar | Aug 16, 2025 ಕೋಲಾರ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆಟದ ಮೈದಾನ ಪಕ್ಕದ ಮಿನಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಕರ್ನಾಟಕ ರತ್ನ , ಯೋಗ ಸಾಧಕ ಡಾ.ರಾಜಕುಮಾರ್ ಹೆಸರನ್ನು ನಾಮಕರಣ ಮಾಡುವಂತೆ ಡಾ.ರಾಜಕುಮಾರ್ ನಾಮಕರಣ ಹೋರಾಟ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಮಧ್ಯಾಹ್ನ 1:30ರ ಯುವ ಸಬಲೀಕರಣ ಮತ್ತು ಕ್ರೀಡ ಇಲಾಖೆಯ ಸಹಾಯಕ ನಿರ್ದೇಶಕಿ ಈ ಗೀತಾ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.