ಚಿತ್ರದುರ್ಗ: ಸರ್ಕಾರದ ಆದೇಶ ಉಲ್ಲಂಘಿಸಿ ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮುಂಗಟ್ಟುಗಳ ಪರವಾನಗಿ ರದ್ದುಪಡಿಸುವಂತೆ ಒತ್ತಾಯಿಸಿ ನಗರದಲ್ಲಿ ನಗರಸಭೆಗೆ ಮನವಿ
ಸರ್ಕಾರದ ಆದೇಶ ಉಲ್ಲಂಘಿಸಿ ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮುಂಗಟ್ಟುಗಳ ಪರವಾನಗಿ ರದ್ದುಪಡಿಸುವಂತೆ ಒತ್ತಾಯಿಸಿ ನಗರಸಭೆಗೆ ಮನವಿ ಸಲ್ಲಿಸಲಾಯಿತು. ಕರುನಾಡ ವಿಜಯ ಸೇನೆ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಆದೇಶದಂತೆ ನಗರಸಭೆ ಹಾಗೂ ಇನ್ನಿತರೆ ಇಲಾಖೆಗಳಿಂದ ಪರವಾನಿಗೆ ಪಡೆದು ನಗರದಲ್ಲಿ ವ್ಯಾಪಾರ, ವಹಿವಾಟು, ಇತರೆ ಸಂಘ-ಸಂಸ್ಥೆಗಳ ಎಂಟರ್‌ಪ್ರೈಸಸ್, ಕಛೇರಿಗಳು, ಖಾಸಗಿ ಆಸ್ಪತ್ರೆ, ಶಾಲಾ ಕಾಲೇಜು ಸೇರಿದಂತೆ ಸೇರಿದಂತೆ ಎಲ್ಲಾ ಸಣ್ಣ ವ್ಯಾಪಾರಸ್ಥರಿಗೆ ಕನ್ನಡ ನಾಮಪಲಕ ಹಾಕುವಂತೆ ಆಗ್ರಹಿಸಿದ್ದಾರೆ.