ಶೋರಾಪುರ: ನಗರದ ವಾರ್ಡ್ ನಂ 31ರ ವಣಕಿಹಾಳ ಪ್ರದೇಶದಲ್ಲಿ ಜಲದಿಗ್ಬಂಧನ, ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ಪರಿಶೀಲನೆ ಸುರಪುರ ನಗರಸಭೆ ವ್ಯಾಪ್ತಿಯ ವಾರ್ಡ 31ರ ವಣಕಿಹಾಳ ಪ್ರದೇಶದಲ್ಲಿ ಜಲದಿಗ್ಬಂಧನ ಉಂಟಾಗಿದ್ದು. ಮನೆಗಳಿಗೆ ಮಳೆ ನೀರು ಹೊಕ್ಕು, ಜನರ ಅತ್ಯಂತ ಸಂಕಷ್ಟಕ್ಕಿಡಾಗಿದ್ದ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಸೆ ಆಲಿಸಿ, ಕೂಡಲೆ ಕಾಳಜಿ ಕೇಂದ್ರ ತೆರೆಯುವಂತೆ ತಹಸೀಲ್ದಾರ್ ಮತ್ತು ನರಸಭೆ ಪೌರಾಯುಕ್ತರಿಗೆ ಸೂಚಿಸಿದರು. ಇನ್ನೂ ಸ್ಥಳೀಯರು ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದಾಗ, ಮನವಿಗೆ ಸ್ಪಂದಿಸಿರುವ ಶಾಸಕರು ಕೂಡಲೇ ವಣಕಿಹಾಳಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.