ರಾಯಚೂರು: ನ.25 ರಿಂದ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಮಟ್ಟದ ಸತ್ಯಾಗ್ರಹ : ವಿರುಪಮ್ಮ
ಮದ್ಯ ನಿಷೇಧ ಆಂದೋಲನವು ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕರ ಸಹಕಾರದಿಂದ ರಾಜ್ಯದಲ್ಲಿ ಮದ್ಯ ನಿಯಂತ್ರಣಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದೆ. ನವೆಂಬರ್ 25 ರಿಂದ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಮಟ್ಟದ ಸತ್ಯಾಗ್ರಹ ನಡೆಸಲು ಸಜ್ಜಾಗುತ್ತಿದೆ ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಚಾಲಕರಾದ ವಿರುಪಮ್ಮ ಬುಧವಾರ 11 ಗಂಟೆಗೆ ಹೇಳಿದರು. ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಹಿಂದೆಯೂ ತಾವೆಲ್ಲರೂ ಜನಬಲ, ಹಣದ ಸಹಾಯ, ಮಾಧ್ಯಮ ಬೆಂಬಲ ನೀಡುವ ಮೂಲಕ ನಮ್ಮೊಂದಿಗೆ ಜೊತೆ ಯಾಗಿದ್ದೀರಿ. ಈಗಲೂ ತಾವೆಲ್ಲರೂ ನಮ್ಮ ಬೇಡಿಕೆ ನಿರ್ಣಾಯಕ ಘಟ್ಟ ತಲುಪಲು ಈ ಮಹಿಳಾ ನೇತೃತ್ವದ ಆಂದೋಲನವನ್ನು ಬೆಂಬಲಿಸಲು ಸಾರ್ವಜನಿಕರಿಗೆ ಮನಿ ಮಾಡಿದರು.