ಮಂಡ್ಯ: ನಗರದಲ್ಲಿ ಗ್ರಾಹಕನ ಸೋಗಿನಲ್ಲಿ ಬಂದವನಿಂದ ಗಿಪ್ಟ್ ಅಂಗಡಿಯಲ್ಲಿ ಸ್ಮಾರ್ಟ್ ವಾಚ್ ಕಳ್ಳತನ, ಸಿಸಿ ಕ್ಯಾಮರಾದಲ್ಲಿ ಸೆರೆ
Mandya, Mandya | Oct 24, 2025 ಗ್ರಾಹಕನ ಸೋಗಿನಲ್ಲಿ ಬಂದವನೊಬ್ಬ ಗಿಪ್ಟ್ ಅಂಗಡಿಯಲ್ಲಿ ಸ್ಮಾರ್ಟ್ ವಾಚ್ ಕಳ್ಳತನ ಮಾಡಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಡ್ಯದ ಸುಭಾಷ್ ನಗರ ಆರ್.ಪಿ.ರಸ್ತೆಯ ಯುಸ್ರಾ ಗಿಫ್ಟ್ ಶಾಪ್ ಅಲ್ಲಿ ಘಟನೆ ಜರುಗಿದೆ. ಗ್ರಾಹಕನ ಸೋಗಿನಲ್ಲಿ ಬಂದು ಅಂಗಡಿ ಹುಡುಗನ ಗಮನ ಬೇರೆಡೆ ಸೆಳೆದು ವಾಚ್ ಕಳ್ಳತನ ಮಾಡಿದ್ದಾನೆ. ಈ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಸದರಿ ವಿಡಿಯೋ ಬಿಡುಗಡೆ ಮಾಡಿರುವ ಅಂಗಡಿ ಮಾಲೀಕ ಕಳ್ಳನ ಪತ್ತೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕಳ್ಳತನ ಮಾಡಿರುವ ವ್ಯಕ್ತಿ ಈ ಹಿಂದೆ ಅಂಗಡಿಗೆ ಆಗಮಿಸಿ ವ್ಯಾಪಾರ ಮಾಡಿ ಯುಪಿಐ ಪಾವತಿ ಮಾಡಿರುವ ದಾಖಲೆ ಹಿಡಿದು ಕಳ್ಳನ ಪತ್ತೆಗೆ ಮುಂದಾಗಿದ್ದಾರೆ.