ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಡಿ.14 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅAದು ಬೆಳಿಗ್ಗೆ 09.50 ಗಂಟೆಗೆ ಬೆಂಗಳೂರಿನಿAದ ಹೊರಟು, ಬೆಳಿಗ್ಗೆ 10.40 ಕ್ಕೆ ಸಂಡೂರಿನ ತೋರಣಗಲ್ಲಿನ ಜಿಂದಾಲ್ ಏರ್ಪೋರ್ಟ್ ಗೆ ಆಗಮಿಸಿ, ಜಿಂದಾಲ್ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಮಾಡುವರು. ಬಳಿಕ ಮಧ್ಯಾಹ್ನ 03 ಗಂಟೆಗೆ ಅಲ್ಲಿಂದ ಹೊರಟು ಸಂಜೆ 04 ಗಂಟೆಗೆ ಕುರುಗೋಡು ಪಟ್ಟಣಕ್ಕೆ ಆಗಮಿಸುವರು. ಪಟ್ಟಣದಲ್ಲಿ ಏರ್ಪಡಿಸಿರುವ 4ನೇ ಉರ್ಸ್-ಎ-ಷರೀಫ್ ಹಜರತ್ ಖ್ವಾಜಾ ಸೈಯದ್ ಶಾ ಸಾಹಿಬ್ ಪೀರ್ ಥೇರ್ ಉರ್ಸ್-ಎ-ರೀಫ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಎಂದು ಡಿ.10,ಬುಧವಾರ ಸಂಜೆ 6ಕ್ಕೆ ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.