ಚಿಕ್ಕಬಳ್ಳಾಪುರ: ಅಂಗಡಿ ತೆರುವು ವಿಚಾರ ಚಿನ್ನಸಂದ್ರದಲ್ಲಿ ರಾಡ್ ಗಳಲ್ಲಿ ಬಡಿದಾಡಿಕೊಂಡ ಗುಂಪು
ಅಂಗಡಿ ಜಾಗಕ್ಕಾಗಿ ಎರಡು ಗುಂಪುಗಳ ನಡುವೆ ರಾಡ್ ಗಳಿಂದ ಮಾರಾಮಾರಿ ನಡೆದಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ನಡು ರಸ್ತೆಯಲ್ಲೇ ಮಹಿಳೆಯರು ಗಂಡಸ್ಸುರ ನಡುವೆ ಹೊಡೆದಾಟ ಬಡೆದಾಟ ವೀಡಿಯೋ ಲಭ್ಯವಾಗಿದ್ದು ಜಮೀನಿನಲ್ಲಿದ್ದ ಅಂಗಡಿ ತೆರುವು ವಿಚಾರಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದೆ.ಅಪೀಸ್ ವುಲ್ಲಾಖಾನ್ ಮೇಲೆ ಸುಲ್ತಾನ್ ,ಕೌಸರ್ ,ಅಲೀಮ್ ,ನಿಸಾಮ್ ,ಇರ್ಪಾನ್ ಎಂಬುವರಿಂದ ಹಲ್ಲೆ ಆರೋಪ ಕೇಳಿ ಬಂದಿದೆ.ಎರಡು ಗುಂಪಿನ ಗಾಯಾಳುಗಳು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.ಇನ್ನೂ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.