ಡಿ.9, ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಬಳ್ಳಾರಿ ನಗರದ ದೇವಿನಗರದಲ್ಲಿರುವ ಪ್ರಸಿದ್ಧ ಪೋಲಾರ್ ಬೇರ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಘಟನೆಯ ವೇಳೆ ಅಂಗಡಿಯಲ್ಲಿ ಇದ್ದ ಸಿಬ್ಬಂದಿ ತಕ್ಷಣವೇ ಹೊರಬಂದು ಸುರಕ್ಷಿತ ಸ್ಥಳಕ್ಕೆ ಸರಿದಿದ್ದು, ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಹಾಗೂ ಅಂಗಡಿ ಸಿಬ್ಬಂದಿ ಶಾಮೀಲಿಯಾಗಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ಸ್ಪಷ್ಟವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಯಾವುದೇ ಜೀವಹಾನಿ ಸಂಭವಿಸದಿದ್ದ