ಚಳ್ಳಕೆರೆ: ನಾಯಕನಹಟ್ಟಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮ
ಚಳ್ಳಕೆರೆ:ನಾಯಕನಹಟ್ಟಿ ಪಟ್ಟಣದ ಕನಕ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಆಯೋಜಿಸಿದ್ದ ಕನಕ ಜಯಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು. ಕನಕ ಮಹಿಳಾ ಸಂಘದ ಸದಸ್ಯ ವಿಜಯಮ್ಮ ಮಾತನಾಡಿ ಕನಕದಾಸರು ದೇಶ ಕಂಡ ಶ್ರೇಷ್ಠ ದಾರ್ಶನಿಕರು. ಸಮಾನತೆಯ ಕನಸು ಕಂಡವರು, ಮನಸ್ಸುಗಳ ಶುದ್ದೀಕರಣಕ್ಕೆ ಜಾಗೃತಿ ಮೂಡಿಸಿದರು. ಒಬ್ಬ ಕವಿಯಾಗಿ, ಭಕ್ತವಾಗಿ, ಚಿಂತಕರಾಗಿ ಆದರ್ಶ ಬದುಕು ನಡೆಸಿದವರು ಎಂದು ಹೇಳಿದರು. ನಂತರ ಸದಸ್ಯ ಲಲಿತಮ್ಮ ಮಾತನಾಡಿದರು.