ಬೆಂಗಳೂರು ಪೂರ್ವ: WVS app ಮೂಲಕ ಬೀದಿ ನಾಯಿಗಳ ವಿವರ ಸಂಗ್ರಹಣೆಗೆ ಕ್ರಮ: ನಗರದಲ್ಲಿ ಪೊಮ್ಮಲ ಸುನೀಲ್ ಕುಮಾರ್
WVS app ಮೂಲಕ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಬೀದಿ ನಾಯಿಗಳ ವಿವರ ಹಾಗೂ ಜಾಗವನ್ನು ಗುರುತಿಸಲಾಗುವುದಾಗಿ ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಮಾಹಿತಿ ನೀಡಿದರು. ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಗರ ಪಾಲಿಕೆಯ ಬ್ಯಾಟರಾಯನಪುರ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಎಬಿಸಿ ಮಾನಿಟರಿಂಗ್ ಕಮಿಟಿ (LABCMC) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಲಸಿಕಾ ಕಾರ್ಯಕ್ರಮಗಳನ್ನು ನಡೆಸುವಾಗ ಬೀದಿ ನಾಯಿಗಳ ಜಾಗಗಳನ್ನು ಗುರುತಿಸುವ ಸಲುವಾಗಿ WVS app ಬಳಸಲು ನಿರ್ದೇಶಿಸಿದರು.