ಬುದ್ದಿಮಾಂದ್ಯ ಯುವತಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಸಾತನೂರು ಗ್ರಾಮದಲ್ಲಿ ಜರುಗಿದೆ. ಮುರುಗ ಅತ್ಯಾಚಾರ ಎಸಗಿರುವ ಆರೋಪಿಯಾಗಿದ್ದು, ಶುಕ್ರವಾರ ಯುವತಿಯ ಸಹೋದರ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಯುವತಿಯ ತಾಯಿ ಮನೆಯಿಂದ ಹೊರ ಹೋಗಿದ್ದ ವೇಳೆ ಆರೋಪಿ ಮನೆಗೆ ತೆರಳಿ ಯುವತಿ ಮೇಲೆ ಅತ್ಯಾಚಾರ ಎಸಗುತ್ತಿದ್ದಾಗ ಯುವತಿ ತಾಯಿ ನೋಡಿ ಜೋರಾಗಿ ಕೂಗಿಕೊಂಡಾಗ ಓಡಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಮೊದಲು ಪ್ರಕರಣದ ಎನ್ ಸಿ ಮಾಡಿದ್ದು, ಬಳಿಕ ಸಂಘಟನೆಗಳು ಠಾಣಾಧಿಕಾರಿ ಶಿವಪ್ರಸಾದ್ ರಾವ್ ಕೆ.ಬಿ ಎಂಬಾತನ ವಿರುದ್ದ ವಿರೋಧ ವ್ಯಕ್ತಪಡಿಸಿದ ಬಳಿಕ ಎಫ್ ಐ ಆರ್ ದಾಖಲಾಗಿದೆ.