ಕೊಳ್ಳೇಗಾಲ: ಚಾಮರಾಜನಗರ ಗಡಿಯಲ್ಲಿ 40 ಕಾಡಾನೆ ಓಡಾಟ- ಪಟ್ಟಣದಲ್ಲಿ ಅರಣ್ಯ ಸಚಿವರು ಹೇಳಿದ್ದೇನು?
ಕಾಡುಪ್ರಾಣಿಗಳಿಗೆ ಯಾವುದೇ ಗಡಿ ಇರಲ್ಲಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಿಂದ ಕಾಡುಪ್ರಾಣಿಗಳ ಓಡಾಟ ಇರಲಿದ್ದು ಈಗಾಗಲೇ 4 ರಾಜ್ಯಗಳ ಜೊತೆ ಸಭೆಯನ್ನೂ ಕೂಡ ಅರಣ್ಯ ಇಲಾಖೆ ಮಾಡಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಕೊಳ್ಳೇಗಾಲದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಗಡಿಯಲ್ಲಿ 40 ಆನೆಗಳ ಓಡಾಟ ಕುರಿತು ಮಾತನಾಡಿ, ಪ್ರಾಣಿಗಳಿಗೆ ಯಾವುದೇ ಗಡಿಗಳಿಲ್ಲ, ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಲಿದ್ದು ಯಾವುದೇ ಹಾನಿಯಾಗದಂತೆ ಆ ರಾಜ್ಯದ ಜೊತೆ ಚರ್ಚೆ ಮಾಡಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದರು.