ಮಳವಳ್ಳಿ: ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಶಿವಕುಮಾರ್ ಸುದ್ದಿಗೋಷ್ಠಿ , ಶಾಸಕರು ಕಾಂಗ್ರೆಸ್ ಕಾರ್ಯಕರ್ತರ ಕುರಿತು ಆಡಿದ ಮಾತುಗಳಿಗೆ ಕ್ಷಮೆಯಾಚನೆ
ಮಳವಳ್ಳಿ : ಕ್ಷೇತ್ರದ ಶಾಸಕರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಪಿ ಎಂ ನರೇಂದ್ರಸ್ವಾಮಿ ಅವರ ಕುರಿತು ಜೊತೆಗೆ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರ ಕುರಿತು ಮಾಡಿರುವ ಟೀಕೆ ಗಳಿಗೆ ಕಾಂಗ್ರೆಸ್ ಮುಖಂಡ ಎಂ ಪಿ ಶಿವಕುಮಾರ್ ಕ್ಷಮೆ ಕೋರಿದ್ದಾರೆ. ಮಳವಳ್ಳಿ ಪಟ್ಟಣದ ತಮ್ಮ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಲವರ ಪ್ರಚೋದನೆಯಿಂ ದಾಗಿ ತಾನು ಶಾಸಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಕುರಿತು ಅಕ್ಷೇಪಾರ್ಹ ಪದಗಳನ್ನು ಬಳಸಿ ಟೀಕೆ ಮಾಡಿದ್ದು ನನ್ನ ಈ ಹೇಳಿಕೆ ಯ ವಿಡಿಯೋ ಬಳಸಿಕೊಂಡು ವಿರೋಧಿಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡುತ್ತಿದ್ದು ನನ್ನ ಟೀಕೆ ವಿರೋಧಿಗಳಿಗೆ ಅಸ್ತ್ರವಾಗಿದ್ದು ಈಗ ನನಗೆ ನನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿದರು.