ಕೋಲಾರ: ಕಳ್ಳತನ ತಪ್ಪಿಸಲು ಕೋಲಾರ ಪೊಲೀಸರಿಂದ ವಿಶೇಷ ಗಸ್ತು
Kolar, Kolar | Nov 30, 2025 ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ವಿಷೇಶ ಗಸ್ತು ಕರ್ತವ್ಯಕ್ಕೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮಂದಿರ, ಮಸೀದಿ, ಚರ್ಚ್, ಬ್ಯಾಂಕ್ ಎ.ಟಿ.ಎಂ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರವಹಿಸಿ ರಾತ್ರಿ ಗಸ್ತು ಕೈಗೊಳ್ಳಲಾಗಿರುತ್ತದೆ. ರಾತ್ರಿ ಸಮಯದಲ್ಲಿ ಅನಗತ್ಯವಾಗಿ ರಸ್ತೆಗಳಲ್ಲಿ ಸಂಚರಿಸುವಂತಹ ವ್ಯಕ್ತಿಗಳಿಗೆ ವಾರ್ನಿಂಗ್ ನೀಡಿ ಮನೆಗೆ ಕಳಿಸುವಂತಹ ಕೆಲಸಗಳು ಸಹ ಈ ಸಂದರ್ಭದಲ್ಲಿ ನಡೆದಿದೆ