ಡಿಸೆಂಬರ್ 21ರ ಭಾನುವಾರ ದಂದು ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕುವ ಪಲ್ಸ್ ಪೋಲಿಯೊ ಕಾರ್ಯಕ್ರಮ ರಾಯಚೂರು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ನಗರ, ಪಟ್ಟಣಗಳಲ್ಲಿಯ ಜನತೆಯು ತಮ್ಮ ಮನೆಗಳಿಗೆ ಹತ್ತಿರದ ಪೋಲಿಯೊ ಬೂತ್ಗಳ ಮಾಹಿತಿಯನ್ನು ಕ್ಯೂಆರ್ ಕೋಡ್ ಸ್ಕ್ಯಾನರ್ ಸ್ಕ್ಯಾನ್ ಮಾಡಿ ತಮ್ಮಗೆ ಹತ್ತಿರದ ಬೂತ್ಗಳಲ್ಲಿ ಲಸಿಕೆ ಹಾಕಿ ಅಭಿಯಾನದಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಪಾಲಕರು ನೋಡಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಸೋಮವಾರ 6 ಗಂಟೆಗೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.