ಮಂಡ್ಯ: ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಜೊತೆ ಆಯೋಗ ಸದಾ ಇರುತ್ತದೆ: ನಗರದಲ್ಲಿ ಅಧ್ಯಕ್ಷ ಡಾ.ಎಲ್ ಮೂರ್ತಿ
Mandya, Mandya | Oct 29, 2025 ಶೋಷಣೆಗೆ ಒಳಗಾದವರು ಯಾರೇ ಆಗಿರಲಿ ಆಯೋಗಕ್ಕೆ ಬಂದು ಪ್ರಕರಣ ದಾಖಲಿಸಬಹುದು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಯೋಗ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಯೋಗ ಅಧ್ಯಕ್ಷ ಡಾ. ಎಲ್ ಮೂರ್ತಿ ಹೇಳಿದರು. ಬುಧವಾರ ಜಿಪಂ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ದಿನಗಳ ಹಿಂದೆ ನಾನು ಆಯೋಗಕ್ಕೆ ನೂತನ ಅಧ್ಯಕ್ಷನಾಗಿ ನೇಮಕ ಕೊಂಡಿದ್ದೇನೆ, ಆಯೋಗದಲ್ಲಿ ಒಟ್ಟಾರೆ 1503 ಪ್ರಕರಣಗಳು ಹಾಗೂ 4943 ಪತ್ರ ವ್ಯವಹಾರದ ಕಡತಗಳು ಬಾಕಿ ಇವೆ ಎಂದರು.