ಬೆಂಗಳೂರು ಉತ್ತರ: ಮಲ್ಲೇಶ್ವರಂ ಕಡ್ಲೇಕಾಯಿ ಪರಿಷೆ ಉದ್ಘಾಟನೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ
ಕಾಡು ಮಲ್ಲೇಶ್ವರ ಗೆಳೆಯರ ಬಳಗ ವತಿಯಿಂದ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಮ್ಮಿಕೊಳ್ಳಲಾಗಿದ್ದ “ಮಲ್ಲೇಶ್ವರಂ ಕಡ್ಲೆಕಾಯಿ ಪರಿಷೆ” ಯ 9ನೇ ವರ್ಷದ ಕಾರ್ಯಕ್ರಮವನ್ನು ಸಚಿವರಾದ ರಾಮಲಿಂಗಾರೆಡ್ಡಿ ಅವರು ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ ಕೆ ಹರಿಪ್ರಸಾದ್, ಕಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಬಿಕೆ ಶಿವರಾಮ್ ಉಪಸ್ಥಿತರಿದ್ದರು ಇನ್ನು ಇದೇ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು ಮಲ್ಲೇಶ್ವರಂ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಬಗ್ಗೆ ಮಾತನಾಡಿ ಹಲವು ವರ್ಷಗಳ ಇತಿಹಾಸ ಕಾಡು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಇದೇ ಎಂದರು.