ಕೆ. ಆರ್. ಪೇಟೆ ತಾಲೂಕಿನ ಗವಿರಂಗನಾಥಸ್ವಾಮಿ ದೇಗುಲದ ಬಳಿ ಗೂಡ್ಸ್ ವಾಹನ ಹರಿದು ಇಬ್ಬರು ಮಹಿಳೆಯರ ಸಾವು ಕೆ. ಆರ್. ಪೇಟೆ ತಾಲೂಕಿನ ಗವಿರಂಗನಾಥಸ್ವಾಮಿ ದೇಗುಲದ ಬಳಿ, ಸಾರಂಗಿ ಗ್ರಾಮದ 58 ವರ್ಷದ ಸರೋಜಮ್ಮ ಮತ್ತು 50 ವರ್ಷದ ಶಾಂತಮ್ಮ ಎಂಬ ಇಬ್ಬರು ಮಹಿಳೆಯರು ಗೂಡ್ಸ್ ವಾಹನ ಹರಿದು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 62 ವರ್ಷದ ನಾಗಮ್ಮ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಬೀಗರ ಔತಣಕ್ಕೆ ಬಂದಿದ್ದ ಮಹಿಳೆಯರು ಊಟ ಮುಗಿಸಿ, ಇಳಿಜಾರಿನಲ್ಲಿ ನಿಂತಿದ್ದ ಚಾಲಕನಿಲ್ಲದ ಗೂಡ್ಸ್ ವಾಹನದಲ್ಲಿ ಕುಳಿತಿದ್ದರು. ಈ ವೇಳೆ ವಾಹನ ಹಿಮ್ಮುಖವಾಗಿ ಚಲಿಸಿ, ಇಳಿಯಲು ಯತ್ನಿಸಿದ ಮಹಿಳೆಯರ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ